Breaking
26 Jun 2026, Fri

ಮಾರುವೇಷದಲ್ಲಿ ಬಂದು ಗಂಡನ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ: ಪತ್ನಿ ಬಂಧನ

ಬಂಟ್ವಾಳ: ಬಿಸಿರೋಡಿನ ಸೋಮಯಾಜಿ ಟೆಕ್ಸ್ ಟೈಲ್ ಅಂಗಡಿಗೆ ಪತ್ನಿ ಮಾರುವೇಷದಲ್ಲಿ ಬಂದು ಗಂಡನ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆ ನಡೆಸಿದ ಮಹಿಳೆಯನ್ನು ಕೃಷ್ಣ ಕುಮಾರ್ ಸೋಮಯಾಜಿ ಅವರ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದ್ದು, ಅವರನ್ನು ಬಂಟ್ವಾಳ ಪೋಲೀಸರು ಬಂಧಿಸಿದ್ದಾರೆ.

ಬುರ್ಖಾ ಧರಿಸಿ ಅಂಗಡಿಗೆ ಪ್ರವೇಶಿಸಿದ ಜ್ಯೋತಿ ಅವರು ಕ್ಯಾಸ್ ಕೌಂಟರ್‌ನಲ್ಲಿ ಕುಳಿತಿದ್ದ ಗಂಡ ಕೃಷ್ಣ ಸೋಮಯಾಜಿ ಅವರ ಮೇಲೆ ಕತ್ತಿಯಿಂದ ಇರಿದಿರುವುದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಕೌಟುಂಬಿಕ ಕಲಹದ ಬಗ್ಗೆ ಮಾತುಗಳು ಕೇಳಿ ಬಂದಿದ್ದು ಕೌಟುಂಬಿಕ ವಿಚಾರಕ್ಕೆ ಈ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *