Breaking
12 Aug 2026, Wed

ರಚನಾ ಕ್ರೈಸ್ತ ವಾಣಿಜ್ಯ ಮಂಡಳಿಗೆ ನೂತನ ಸಮಿತಿ ಆಯ್ಕೆ

ಮಂಗಳೂರು: ರಚನಾ –ಕಥೊಲಿಕ ವಾಣಿಜ್ಯ ಮಹಾಮಂಡಳಿಯ ಅಧ್ಯಕ್ಷರಾಗಿ ರೊಯ್ ಕ್ಯಾಸ್ತೆಲಿನೊ 26 ನೇ ಮಹಾಸಭೆಯು ನ. 16 ರಂದು ನಗರದ ಬೆಂದೂರು ಸಭಾಂಗಣದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಕ್ರೈಸ್ತ ಮುಖಂಡ ಹಾಗೂ ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಲೆಸ್ಲಿ ರೇಗೊ, ಕಾರ್ಯದರ್ಶಿಯಾಗಿ ಎಲ್ರೊನ್ ರೊಡ್ರಿಗಸ್, ಜತೆ ಕಾರ್ಯದರ್ಶಿಯಾಗಿ ಜೇಮ್ಸ್ ಮಾಡ್ತಾ, ಕೋಶಾಧಿಕಾರಿಯಾಗಿ ನವೀನ್ ಲೋಬೊ ಹಾಗೂ ಮಾರ್ಸೆಲ್ ಮೊಂತೇರೊ, ರೊನಾಲ್ಡ್ ಗೋಮ್ಸ್, ಜೊಕಿಂ ಸ್ಟ್ಯಾನಿ ಆಲ್ವಾರಿಸ್, ವಿಲಿಯಮ್ ಡಿಸೋಜ, ನೆಲ್ಸನ್ ಮೊಂತೇರೊ ಮತ್ತು ಸುನೀಲ್ ವಾಸ್ ಇವರುಗಳು ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಗಿಲ್ಬರ್ಟ್ ಡಿಸೋಜ ಚುನಾವಣಾ ಪ್ರಕ್ರಿಯೆಗಳನ್ನು ಮುನ್ನಡೆಸಿದರು.

ಕ್ರೈಸ್ತ ಸಮುದಾಯದ ಉದ್ಯಮಶೀಲತೆಯನ್ನು ಹೆಚ್ಚಿಸಲು 1999 ರಲ್ಲಿ ಆರಂಭಗೊಂಡ ರಚನಾ ಇದುವರೆಗೆ ಉದ್ಯಮಿಗಳನ್ನು ಬಲಪಡಿಸಲು ಹಾಗೂ ಯುವಜನತೆ ಉದ್ಯಮ ರಂಗಕ್ಕೆ ಬರಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ರಚನಾ ಪ್ರಶಸ್ತಿಗಳ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದೆ.

Leave a Reply

Your email address will not be published. Required fields are marked *