ವಿಟ್ಲ: ಮನೆಯೊಂದಕ್ಕೆ ಸಿಡಿಲು ಬಡಿದು ಮಗುವಿನ ಕಿವಿಗೆ ಗಾಯವಾದ ಘಟನೆ ವಿಟ್ಲದ ಕೊಲ್ನಾಡು ಗ್ರಾಮದಲ್ಲಿ ನ. 18 ರಂದು ನಡೆದಿದೆ.
ಬಾರೆಬೆಟ್ಟು ನಿವಾಸಿ ಅಬ್ದುಲ್ ಲತೀಫ್ ಎಂಬವರ ಮನೆಗೆ ರಾತ್ರಿ ಸಿಡಿಲು ಬಡಿದು ಹಾನಿಯಾಗಿದ್ದು, ಈ ಸಂದರ್ಭದಲ್ಲಿ ಮನೆಯೊಳಗೆ ಮಹಿಳೆ ಮತ್ತು ಮಗು ಇದ್ದು, ಪುಟಾಣಿ ಮಗುವಿನ ಕಿವಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.





