ಬಂಟ್ವಾಳ : ಯಕ್ಷ ಕದಂಬ ಯಕ್ಷಗಾನ ಬಳಗ ಮಾವಿನಕಟ್ಟೆ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವ ಮಾವಿನಕಟ್ಟೆ ಮೈದಾನದಲ್ಲಿ ನಡೆಯಿತು.ದೀಪ ಬೆಳಗುವುದರೊಂದಿಗೆ ಉಪಸ್ಥಿತ ಗಣ್ಯರು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರಾಜೇಂದ್ರ ಸಾಲಿಯಾನ್ ಹಲಾಯಿ, ಯೋಗೀಶ್ ಪಿ ಕೋಟ್ಯಾನ್, ಅಶೋಕ್ ಹಲಾಯಿ ಮಾತನಾಡಿ ಯಕ್ಷ ಕಂದಂಬ ಯಕ್ಷಗಾನ ತಂಡ ನಿರಂತರವಾಗಿ ಇಂತಹ ಕಲಾ ಸೇವೆಯನ್ನು ಮಾಡಲಿ ಈ ಕೂಟ ಇನ್ನಷ್ಟು ಹೆಸರುವಾಸಿಯಾಗಲಿ ಎಂದು ಶುಭಹಾರೈಸಿದರು.
ವೇದಿಕೆಯಲ್ಲಿ ಬಳಗದ ಅಧ್ಯಕ್ಷರಾದ ರವಿ ಪೂಜಾರಿ ಏರೋಡಿ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಶೆಟ್ಟಿ, ಚೆನ್ನೈತ್ತೊಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ, ವಿಶ್ವನಾಥ ಪಂಡಿತ್, ಜಗದೀಶ್ ಶೆಟ್ಟಿ ಉಳಗುಡ್ಡೆ, ಶ್ರೀಮತಿ ದೇವಕಿ ಮಾವಿನಕಟ್ಟೆ, ಶಿಕ್ಷಕಿ ಶ್ರೀಮತಿ ಲಕ್ಷ್ಮಿ ಶಿವನಗರ, ಜಗದೀಶ್ ಶೆಟ್ಟಿ ಮಾವಿನಕಟ್ಟೆ ಉಪಸ್ಥಿತರಿದ್ದರು.
ಯಕ್ಷಗಾನ ನಾಟ್ಯ ಗುರುಗಳಾದ ನರಸಿಂಹ ಮಯ್ಯ ಅಲೆತ್ತೂರು, ನಿವೃತ್ತ ಯೋಧ ರಾಜು ಪೂಜಾರಿ ಹಲಾಯಿ, ಯಕ್ಷ ಕದಂಬ ಬಳಗದ ಪಂಚಮಿ ಮಾವಿನಕಟ್ಟೆ, ಸಮೀಕ್ಷಾ ಪೆಜಕ್ಕಳ ಇವರನ್ನು ಸನ್ಮಾನಿಸಲಾಯಿತು.
ಕುಕ್ಕಿಪಾಡಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಹಾಗೂ ಚಾಮುಂಡೇಶ್ವರಿ ಭಜನಾ ಮಂಡಳಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.
ಯಕ್ಷ ಕದಂಬ ಬಳಗದಿಂದ ಕದಂಬ ವನವಾಸಿನಿ ಯಕ್ಷಗಾನ ಬಯಲಾಟ ನಡೆಯಿತು.ಬಳಗದ ಸಂಚಾಲಕಿ ಶ್ರೀಮತಿ ಶಶಿಕಲಾ ಸ್ವಾಗತಿಸಿ, ಪಂಚಮಿ ಹಾಗೂ ನಿತಿನ್ ಶೆಟ್ಟಿ ಪೆಜಕ್ಕಳ ಕಾರ್ಯಕ್ರಮ ನಿರೂಪಿಸಿದರು.