ಮಾಣಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅನಂತಾಡಿಯಲ್ಲಿ ನ. 11ರಂದು ಜರುಗಿದ ಮಾಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸ. ಕಿ. ಪ್ರಾ. ಶಾಲೆ ಏಮಾಜೆ ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ 9 ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಿರಿಯ ವಿಭಾಗ (1-4ನೇ )
ಪ್ರಕೃತಿ 4ನೇ ತರಗತಿ – ಕಥೆ ಹೇಳುವುದು ಪ್ರಥಮ, ಕನ್ನಡ ಕಂಠಪಾಠ ಪ್ರಥಮ,
ಖದೀಜ ಮಾಶಿತ 4ನೇ ತರಗತಿ – ಧಾರ್ಮಿಕ ಪಠಣ ಅರೇಬಿಕ್ ಪ್ರಥಮ,
ಮನ್ವಿತ್ ಎಂ 3ನೇ ತರಗತಿ – ಕ್ಲೇ ಮಾಡೆಲಿಂಗ್ ಪ್ರಥಮ,
ಜ್ಞಾನೇಶ್ 4ನೇ ತರಗತಿ – ಆಶುಭಾಷಣ ಪ್ರಥಮ,
ಆರ್ಯನ್ 3ನೇ ತರಗತಿ – ಛದ್ಮವೇಷ ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ ದ್ವಿತೀಯ.
ಜಿ.ಎಂ.ಆಯುಷ್ ಆಚಾರ್ಯ – ಚಿತ್ರಕಲೆ ದ್ವಿತೀಯ,
ಅದಿತಿ. ಕೆ. ಪಿ – ಅಭಿನಯ ಗೀತೆ ತೃತೀಯ,
ವಂದಿತಾ. ಎಲ್- ದೇಶಭಕ್ತಿ ಗೀತೆ ತೃತೀಯ,

ಹಿರಿಯರ ವಿಭಾಗ (5ರಿಂದ 7ನೇ )
ಶ್ಲೋಕ್ ರೈ.ಬಿ 5ನೇ ತರಗತಿ – ಕ್ಲೇ ಮಾಡೆಲಿಂಗ್ ಪ್ರಥಮ
ಸಂಪ್ರಿತ್ 5ನೇ ತರಗತಿ – ಮಿಮಿಕ್ರಿ ಪ್ರಥಮ,
ವರ್ಷ 5ನೇ ತರಗತಿ – ಕನ್ನಡ ಪ್ರಬಂಧ ಪ್ರಥಮ, ಆಶುಭಾಷಣ ದ್ವಿತೀಯ,
ರಿಧಿಕಾ ಶೆಟ್ಟಿ 5ನೇ ತರಗತಿ – ಕವನ ವಾಚನ ದ್ವಿತೀಯ, ಕಥೆ ಹೇಳುವುದು ತೃತೀಯ
ಸ್ಪರ್ಧೆಯಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ಶಿಕ್ಷಕ ವೃಂದ ಅಭಿನಂದಿಸಿದೆ.




