Breaking
22 Mar 2026, Sun

ಬೆಂಜನಪದವಿನ ಅವಿವಾಹಿತೆ ಯುವತಿ ನಾಪತ್ತೆ

ಬಂಟ್ವಾಳ: ಅವಿವಾಹಿತ ಯುವತಿಯೊಬ್ಬಳು ಮನೆಯಿಂದ ಹೊರಟು ಹೋಗಿ ಮನೆಗೆ ವಾಪಾಸ್ಸಾಗದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳದ ಬೆಂಜನಪದವಿನಲ್ಲಿ ನಡೆದಿದೆ.

ನಾಪತ್ತೆಯಾದ ಯುವತಿಯನ್ನು ಬೆಂಜನಪದವಿನ ಶಿವಾಜಿನಗರದ ನಿವಾಸಿ ಮರಿಯಾ ಆಲ್ಬರ್ಟ್ ಡಿಸೋಜಾ ಎಂದು ಗುರುತಿಸಲಾಗಿದೆ.

ಮರಿಯಾ ಒಂದು ವರ್ಷದ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡ ನಂತರ, ತನ್ನ ಅತ್ತೆ ಮೊಲ್ಲಿ ಟೆಲ್ಲಿಸ್ ಅವರೊಂದಿಗೆ ಬೆಂಜನಪದವಿನಲ್ಲಿರುವ ವಾಸವಾಗಿದ್ದಳು. ಆದರೆ ನ. 9 ರಂದು, ಅತ್ತೆ ಚರ್ಚ್‌ಗೆ ತೆರಳಿದ್ದ ವೇಳೆ ಮರಿಯಾ ಮನೆಯಿಂದ ಹೊರಟುಹೋಗಿದ್ದು, ಬಳಿಕ ಮನೆಗೆ ವಾಪಾಸ್ಸಾಗದೇ ನಾಪತ್ತೆಯಾಗಿದ್ದಾರೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *