ಉಡುಪಿ: ಶ್ರೀ ಕ್ಷೇತ್ರ ಶಂಕರಪುರ, ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನ, ಶ್ರೀ ದ್ವಾರಕಾಮಾಯಿ ಮಠ ಶಂಕರಪುರ ಉಡುಪಿ ಇಲ್ಲಿ ಶ್ರೀ ಕಾಲಭೈರವ ಜಯಂತಿ ಪ್ರಯುಕ್ತ ನ.12 ರಂದು ಅಘೋರ ಭೈರವ ಹವನ್ ಹಾಗೂ ಮಹಾಭೋಗ್ ನಡೆಯಲಿದೆ.

ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಉಪಸ್ಥಿತಿಯಲ್ಲಿ ಅಘೋರ ಅಖಾಡ್ ನ ಅಘೋರಿ ಶ್ರೀ ಮದನ್ ನಾಥ್ ಜೀಯವರು ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಡಲಿದ್ದಾರೆ.

ಅಂದು ಬೆಳಗ್ಗೆ 9 ಗಂಟೆಗೆ ಸಾಯಿ ಈಶ್ವರ್ ಗುರೂಜಿಯವರು ಧರ್ಮ ರಕ್ಷಣೆಯ ಸಂಕಲ್ಪದಲ್ಲಿ ಕಾಲ ಭೈರವ ದೀಕ್ಷೆ ನೀಡಲಿದ್ದಾರೆ. ಈ ದೀಕ್ಷೆಯು ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ಪವಿತ್ರ ವಿಧಿಯಾಗಿದೆ. ಮಾತ್ರವಲ್ಲ ಇದು ಮುಕ್ತಿಯನ್ನು ಪಡೆಯಲು ಮತ್ತು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಗುರೂಜಿಯನ್ನು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯ ಮೂಲಕ ಮನವಿ ಮಾಡಿದೆ.





