ಹರ್ಯಾಣ: ಯಾವುದೇ ವ್ಯಕ್ತಿಯು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ, ಚಾಲಕನಿಗೆ ಮಾತ್ರವಲ್ಲದೆ ಆತನಿಗೆ ಮದ್ಯ ಮಾರಾಟ ಮಾಡಿದ ಬಾರ್ ಮೇಲೂ ಕಾನೂನು ಕ್ರಮ ಜರುಗಿಸಲು ಹರ್ಯಾಣದ ಗುರುಗ್ರಾಮದ ಪೊಲೀಸರು ಮುಂದಾಗಿದ್ದಾರೆ.

ಈ ಸಂಬಂಧ, ನಗರದ ಎಲ್ಲಾ ಬಾರ್‌ಗಳು ಮತ್ತು ಕ್ಲಬ್‌ಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದು, ಯಾವುದೇ ಗ್ರಾಹಕರು ಮದ್ಯದ ಪ್ರಭಾವದಲ್ಲಿದ್ದಾಗ ವಾಹನ ಚಲಾಯಿಸಿಕೊಂಡು ಹೋಗದಂತೆ ನೋಡಿಕೊಳ್ಳಬೇಕು.

ತುಂಬಾ ಹೊತ್ತು ಮದ್ಯ ಸೇವಿಸುವಂತಹ ಗ್ರಾಹಕರನ್ನು ಬಾರ್ ನ ಬೌನ್ಸರ್‌ಗಳು ಇಲ್ಲವೇ ಸಿಬ್ಬಂದಿ ಗುರುತಿಸಬೇಕು ಮತ್ತು ಗ್ರಾಹಕರು ಸುರಕ್ಷಿತವಾಗಿ ಮನೆಗೆ ತಲುಪಲು ಅನುವಾಗುವಂತೆ ಟ್ಯಾಕ್ಸಿಯಂತಹ ಸಾರಿಗೆ ವ್ಯವಸ್ಥೆಗಳನ್ನು ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.




