Breaking
24 Jun 2026, Wed

ಯಕ್ಷಗಾನ ಗುರು, ಕವಿ ವಿದ್ವಾಂಸ ಮತ್ತು ಗೀತನಾಟಕಕಾರ ಗಣೇಶ್ ಕೊಲೆಕಾಡಿ ಇನ್ನಿಲ್ಲ

ಮಂಗಳೂರು: ಯಕ್ಷಗಾನ ಗುರುಗಳು, ಕವಿ ವಿದ್ವಾಂಸ ಮತ್ತು ಗೀತನಾಟಕಕಾರ ಗಣೇಶ್ ಕೊಲೆಕಾಡಿ ಅವರು ನ.7 ರಂದು ನಿಧನರಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. 60ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ, ತುಳು ಮತ್ತು ಕನ್ನಡದಲ್ಲಿ ಆರು ನಾಟಕಗಳನ್ನು ರಚಿಸಿದ್ದ ಗಣೇಶ್ ಕೊಲೆಕಾಡಿಯವರು ತಾಳಮದ್ದಳೆಯ ಅರ್ಥಧಾರಿಗಳು ಕೂಡ ಆಗಿದ್ದರು.

ಇವರ ನಿಧನಕ್ಕೆ ಕಲಾವಿದರು , ಯಕ್ಷಗಾನ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *