ಬಂಟ್ವಾಳ: ಸಜೀಪಮೂಡದ ಅನ್ನಪಾಡಿ ಶ್ರೀ ಕ್ಷೇತ್ರದಲ್ಲಿರುವ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಡಿ. 28 ಭಾನುವಾರದಂದು ಶ್ರೀ ಬಾಲ ಗಣಪತಿ ಮೂಲ ಮಂತ್ರ ಲಕ್ಷಜಪದೂರ್ವ ಹೋಮ ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು ಇದರ ಪೂರ್ವ ಸಿದ್ಧತಾ ಸಭೆ ಯಾಗವು ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಪೂರ್ವ ಸಿದ್ಧತಾ ಸಭೆಯಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಕಾರ್ಯಕ್ರಮದ ರೂಪುರೇಷೆ ನೀಡಿದರು. ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾ ಜೇ ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಗೂ ಹೊರೆ ಕಾಣಿಕೆಯ ವಿವರ ತಿಳಿಸಿದರು. ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ , ಪದಾಧಿಕಾರಿಗಳಾದ ನಿತಿನ್ ಅರಸ , ಚಂದ್ರಶೇಖರ, ಹರೀಶ್ ಬಂಗೇರ, ಗಿರೀಶ್ ಕುಮಾರ್ , ರಮೇಶ ಅನ್ನ ಪಾಡಿ , ಅಶೋಕಗಟ್ಟಿ ನಂದಾವರ, ಸುರೇಶ್ ಬಂಗೇರ, ಲಿಂಗಪ್ಪ ದೋಟ , ಭಾಸ್ಕರ ಮೊದಲಾದವರು ಸೂಕ್ತ ಸಲಹೆ ಸೂಚನೆ ನೀಡಿದರು.




