ಬೆಳಾಲು : ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಬೆಳ್ತಂಗಡಿ ಹಾಗೂ ಗ್ರಾಮ ಪಂಚಾಯಿತ್ ಬೆಳಾಲು ಇದರ ಸಹಯೋಗದಲ್ಲಿ ನ. 06 ರಂದು 265 ನಾಯಿಗಳಿಗೆ ಉಚಿತ ಹುಚ್ಚು ನಾಯಿ ನಿರೋಧಕ ಲಸಿಕ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮವನ್ನು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಇವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಜಿರೆ ಪಶು ಪಶುವೈದ್ಯಕೀಯ ಪರೀಕ್ಷಕರಾದ ಸಚಿನ್, ಪಶು ಸಖಿ ಯಶೋಧ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಊರವರು ಉಪಸ್ಥಿತರಿದರು .






