Breaking
22 Sep 2026, Tue

ಕಡೂರಿನ ಬುಕ್ಕಸಾಗರ ಬಳಿ ಕಾರು-ಬೈಕ್ ಮುಖಾಮುಖಿ ಡಿಕ್ಕಿ, ಸವಾರ ಸಾವು

ಚಿಕ್ಕಮಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬುಕ್ಕಸಾಗರ ಬಳಿ ನ.6 ರಂದು ನಡೆದಿದೆ.

ಮೃತ ಸವಾರನನ್ನು ಮೂಲತಃ ಕೇರಳದ ಕಣ್ಣೂರು ಮೂಲದ ಅನಿಸ್ (21) ಎಂದು ಗುರುತಿಸಲಾಗಿದೆ. ಕಡೂರು ಪಟ್ಟಣದ ಬಟ್ಟೆ ಅಂಗಡಿಯಲ್ಲಿ ಮ್ಯಾನೇಜರ್ ಆಗಿದ್ದ ಅನಿಸ್ ಅವರು ದತ್ತಪೀಠದಿಂದ ವಾಪಸ್ಸಾಗುತ್ತಿದ್ದಾಗ ಅಪಘಾತವಾಗಿ ಮೃತಪಟ್ಟಿದ್ದಾರೆ.

ಕಡೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *