Breaking
22 Mar 2026, Sun

ಚಿಕ್ಕಮಗಳೂರಿನಲ್ಲಿ ದೈವ ಮೈಮೇಲೆ ಬಂದಿದೆ ಎಂದು ಸರ್ವೆ ಅಧಿಕಾರಿಗಳನ್ನು ಹೆದರಿಸಲು ಯತ್ನ

ಚಿಕ್ಕಮಗಳೂರು: ಜಮೀನು ಸರ್ವೆ ವೇಳೆ ವ್ಯಕ್ತಿಯೋರ್ವ ದೈವ ಬಂತೆಂದು ಅಧಿಕಾರಿಗಳನ್ನು ಹೆದರಿಸಲು ಯತ್ನಿಸಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಚಿಕ್ಕನಗುಂಡಿ ಗ್ರಾಮದಲ್ಲಿ ನಡೆದಿದೆ.

ಸುರೇಶ್ ಎಂಬಾತ ಅಧಿಕಾರಿಗಳನ್ನು ಹೆದರಿಸಲು ಯತ್ನಿಸಿರುವ ವ್ಯಕ್ತಿಯಾಗಿದ್ದಾನೆ.

ಸುರೇಶ್ ಹಾಗೂ ಅಣ್ಣ ತಮ್ಮಂದಿರ ನಡುವೆ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆಯಾಗಿದ್ದು ಸರ್ವೆ ನಡೆಸುವಂತೆ ಕೊಪ್ಪ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ವೆ ಕಾರ್ಯಕ್ಕೆಂದು ಅಧಿಕಾರಿಗಳು ಜಮೀನಿಗೆ ಬಂದಿದ್ದಾರೆ.

ಆಗ ಸುರೇಶ್ ಎಂಬ ವ್ಯಕ್ತಿ, ದೈವ ಮೈಮೇಲೆ ಬಂದಿದೆ ಎಂದು ಹೇಳಿ ಕೈಯಲ್ಲಿ ಬೆಂಕಿ ಹಿಡಿದುಕೊಂಡು ಬಂದು ಅತ್ತಿಂದಿತ್ತ ಓಡಾಡಿ ನಿಂತಿದ್ದ ಮಹಿಳೆಯ ಮೇಲೆ ಹಲ್ಲೆ ಮಾಡಿ ಹೈಡ್ರಾಮಾ ಮಾಡಿದ್ದಾನೆ.

ಘಟನೆ ಕಂಡು ಸರ್ವೆ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳು, ಪೊಲೀಸರು ದಂಗಾಗಿದ್ದಾರೆ.

Leave a Reply

Your email address will not be published. Required fields are marked *