Breaking
22 Mar 2026, Sun

ಟ್ಯೂಶನ್ ಬಿಟ್ಟು ಮನೆಗೆ ಮರಳುತ್ತಿದ್ದ ಬಾಲಕಿಗೆ ಕಿರುಕುಳ ಆರೋಪ, ಆರೋಪಿ ಅರೆಸ್ಟ್

ಕಾಸರಗೋಡು: ಅಕ್ಟೋಬರ್ 14 ರಂದು ಟ್ಯೂಶನ್ ಬಿಟ್ಟು ಮನೆಗೆ ಮರಳುತ್ತಿದ್ದ 14 ವರ್ಷದ ಬಾಲಕಿಯನ್ನು ಕಾರಿನಲ್ಲಿ ಹತ್ತಿಸಿ ಕಿರುಕುಳಕ್ಕೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕಾಸರಗೋಡು ವಿನ ವೆಳ್ಳರಿಕುಂಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾಞಂಗಾಡ್ ಮಾಲೋಂ ಚುಳ್ಳಿಕಾರ್ಯೋಡುಚಾಲ್ ನಿವಾಸಿ ಪ್ರಿನ್ಸ್(47) ಎಂದು ಗುರುತಿಸಲಾಗಿದೆ.

ಆರೋಪಿ ಪ್ರಿನ್ಸ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದಾನೆ. ಈತನನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *