Breaking
22 Mar 2026, Sun

ಸಿಎಂ ಆಗ್ತಾರಾ..? ಕನಕಪುರ ಬಂಡೆ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಅದೇನಪ್ಪಾ ಅಂದ್ರೆ ಸಿಎಂ ಆಗಿ ಪದಗ್ರಹಣ ಮಾಡೋದಕ್ಕೆ ಡಿಕೆ ಶಿವಕುಮಾರ್ ಡೆಡ್ ಲೈನ್ ಕೊಟ್ಟಿದ್ದಾರೆಂಬ ಅನ್ನುವ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವದಂತಿಗೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಪತ್ರಕರ್ತರು ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಕೇಳಿದಾಗ ಅವರು ಗರಂ ಆಗಿದ್ದು ನಿನಗೆ ಹೇಗೆ ಗೊತ್ತು?.. ಎಂದು ಸಿದ್ದರಾಮಯ್ಯ ಪತ್ರಕರ್ತರನ್ನು ಗದರಿದ್ದಾರೆ. ಪತ್ರಿಕೆ ವಿಚಾರ ಹೇಳಿದಾಗ ಯಾವ ಪೇಪರ್ ನಲ್ಲಿ? ನಾನು ಎಲ್ಲ ಪತ್ರಿಕೆಯನ್ನು ಒದುತ್ತೇನೆ. ಎಲ್ಲೂ ನೋಡಿಲ್ಲ ಎಂದಿದ್ದಾರೆ.

ಮೇಲ್ನೋಟಕ್ಕೆ ಕಾಂಗ್ರೆಸ್ ನಲ್ಲಿ ಏನಾಗುತ್ತಿಲ್ಲ ಎಂಬಂತೆ ಬಿಂಬಿಸಲು ಯತ್ನಿಸಿದರೂ, ಒಳಗೊಳಗೆ ನಡೆಯುತ್ತಿರುವ ಬೆಳವಣಿಗೆ, ನಾಯಕರ ಬಾಯಿಂದ ಹೊರ ಬರುತ್ತಿರುವ ಮಾತುಗಳು, ಚರ್ಚೆಗೀಡು ಮಾಡಿವೆ.

Leave a Reply

Your email address will not be published. Required fields are marked *