Breaking
23 Mar 2026, Mon

ಲೋಕಾಯುಕ್ತ ಇಲಾಖೆಗೆ ಡಿವೈಎಸ್ಪಿಯಾಗಿ ಮಂಜುನಾಥ್ ಗೌಡ ನೇಮಕ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯನಿಂದ ಸತ್ಯ ಕಕ್ಕಿಸಿ ಜೈಲಿಗಟ್ಟುವಲ್ಲಿ ಎಸ್.ಐ.ಟಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ಇವರಿಗೆ ಸರಕಾರ ಡಿವೈಎಸ್ಪಿ ಆಗಿ ಪದೋನ್ನತಿ ನೀಡಿತ್ತು.

ಇದೀಗ ಸರಕಾರ ಮಂಜುನಾಥ್ ಅವರನ್ನು ಲೋಕಾಯುಕ್ತ ಇಲಾಖೆಗೆ ಡಿವೈಎಸ್ಪಿಯಾಗಿ ನೇಮಕ ಮಾಡಿದೆ.ಆದ್ರೆ ಧರ್ಮಸ್ಥಳ ಪ್ರಕರಣ ಮುಗಿಯುವವರೆಗೆ ಎಸ್.ಐ.ಟಿ ಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಮೂಲತಃ ಮಂಡ್ಯ ಜಿಲ್ಲೆಯ ನಿವಾಸಿ ಮಂಜುನಾಥ್ ಗೌಡ ಇವರನ್ನು ಸರಕಾರ ಧರ್ಮಸ್ಥಳ ಪ್ರಕರಣದ ಎಸ್.ಐ.ಟಿ ಗೆ ನೇಮಕ ಮಾಡಿದ್ದರು.

ಅ. 13 ರಂದು ಸರಕಾರ ಡಿವೈಎಸ್ಪಿ ಹುದ್ದೆಗೆ ಪದೋನ್ನತಿ ನೀಡಿತ್ತು.ಎಸ್.ಐ.ಟಿ ಪ್ರಕರಣ ಮುಕ್ತಾಯವಾದ ಬಳಿಕ ಲೋಕಾಯುಕ್ತ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *