Breaking
19 Sep 2026, Sat

20 ಅಡಿ ಆಳದ ಕೆರೆ ನೀರಿಗೆ ಬಿದ್ದ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹುಡುಕಿಕೊಟ್ಟ ಈಶ್ವರ್ ಮಲ್ಪೆ

ಮಲ್ಪೆ: 20 ಅಡಿ ಆಳದ ಕೆರೆಯಲ್ಲಿ ಬಿದ್ದ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹುಡುಕಿ ಮೇಲಕ್ಕೆತ್ತಿ ಮಾಲಕರಿಗೆ ಹಸ್ತಾಂತರಿಸಿದ ಈಶ್ವರ್ ಮಲ್ಪೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅ. 29 ರಂದು ಚಿಕ್ಕಮಗಳೂರು ಜಿಲ್ಲೆಯ ಬೇಲೂರು ರಸ್ತೆ ಮಾರ್ಗದಲ್ಲಿ ಸಾಗುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದು ಮಾಲಕ ನದಿಯಿಂದ ಈಜಿ ದಡ ಸೇರಿದ್ದರು. ನಂತರ ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು. ಆದರೆ ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲ ನೀರಿಗೆ ಬಿದ್ದಿದ್ದರಿಂದ ತಕ್ಷಣವೇ ಈಶ್ವರ್ ಮಲ್ಪೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು ಬಳಿಕ ಈಶ್ವರ್ ಮಲ್ಪೆ ಸ್ಥಳಕ್ಕಾಗಮಿಸಿ ನೀರಿಗೆ ಬಿದ್ದ ಚಿನ್ನಾಭರಣದ ಚೀಲವನ್ನು ಮೇಲಕ್ಕೆತ್ತಿ ವಾರಸುದಾರರಿಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *