Breaking
19 Sep 2026, Sat

ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಆಟೋ ನಿಲ್ಲಿಸಿ ಚಾಲಕ ನಾಪತ್ತೆ

ಬಂಟ್ವಾಳ: ಆಟೋ ಚಾಲಕನೊಬ್ಬ ಸೇತುವೆಯಲ್ಲಿ ಆಟೋವನ್ನು ನಿಲ್ಲಿಸಿ ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೆಯ ಸೇತುವೆಯ ಸಮೀಪ ಅ.29 ರಂದು ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಮರ್ಣಬೈಲ್ ನಿವಾಸಿಯಾಗಿರುವ ಪೃಥಮ್ ಲೋಬೋ ಎಂದು ಗುರುತಿಸಲಾಗಿದೆ.

ಅ.29 ರಂದು ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಅವರು ತಮ್ಮ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಹಳೆಯ ಪಾಣೆಮಂಗಳೂರು ಸೇತುವೆಗೆ ಬಂದು, ಅದನ್ನು ಅಲ್ಲಿ ನಿಲ್ಲಿಸಿ ಬಳಿಕ ನಾಪತ್ತೆಯಾಗಿದ್ದಾರೆ ತಿಳಿದು ಬಂದಿದೆ.

ಪೃಥಮ್ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳೀಯ ಈಜುಗಾರರು ಹಾಗೂ ಬಂಟ್ವಾಳ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದ ಸಿಬ್ಬಂದಿ ದಿನಪೂರ್ತಿ ನದಿಯಲ್ಲಿ ಶೋಧ ನಡೆಸಿದ್ರೂ, ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *