ಬೆಳ್ತಂಗಡಿ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಗೋವಿಂದೂರು ಸಮೀಪದ ಮಾವಿನಕಟ್ಟೆಯ ಪಿಲಿಗೂಡು ಎಂಬಲ್ಲಿ ಅ. 27 ರಂದು ನಡೆದಿದೆ

ದಿ. ರಾಬರ್ಟ್ ರೋಡ್ರಿಗಸ್ ರವರ ಪುತ್ರ ಅನಿಲ್ ಪ್ರಕಾಶ್ ರೋಡ್ರಿಗಸ್(29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.
ಅನಿಲ್ ಅವರು ತನ್ನ ತಾಯಿಯೊಂದಿಗೆ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




