Breaking
23 Mar 2026, Mon

ಶಿವಮೊಗ್ಗದಲ್ಲಿ ಕಾರ್ಮಿಕ ಇಲಾಖೆಯ ಕಟ್ಟಡ ಕುಸಿದು ಓರ್ವ ಸಾವು, ಮತ್ತೋರ್ವ ಗಂಭೀರ

ಶಿವಮೊಗ್ಗ: ನೂತನವಾಗಿ ನಿರ್ಮಿಸಲಾಗಿದ್ದ ಕಾರ್ಮಿಕ ಇಲಾಖೆಯ ಸಮುಚ್ಛಯ ಕಟ್ಟಡದ ಗೋಡೆ ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಕೋಟೆಗಂಗೂರಿನ ತಾಲೂಕಿನ ಸಿದ್ಲೀಪುರ ಗ್ರಾಮದಲ್ಲಿದಲ್ಲಿ ನಡೆದಿದೆ.

ಮೃತನನ್ನು ಸಿದ್ಲೀಪುರ ಗ್ರಾಮದ ಮಂಜು (35) ಎಂದು ಗುರುತಿಸಲಾಗಿದೆ.

ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗಿದ್ದ ತಾತ್ಕಾಲಿಕ ಕಟ್ಟಡ ಕೆಡವಲು ಮಂಜು ಮತ್ತು ಆತನ ಸಹೋದರ ಮುತ್ತು ಮುಂದಾಗಿದ್ದರು. ಈ ವೇಳೆ, ಸಮುಚ್ಚಾಯ ಕಟ್ಟಡದ ಒಂದು ಭಾಗದ ಗೋಡೆ ದಿಢೀರನೆ ಕುಸಿದು ಬಿದ್ದು ಈ ಅವಘಡ ಸಂಭವಿಸಿದ್ದು ಆತನ ಸಹೋದರ ಮುತ್ತು ಅವರ ಕೈ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಮುತ್ತುವನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಮಿಕ ಇಲಾಖೆಯ ವತಿಯಿಂದ ಇತ್ತೀಚೆಗೆ ಸಿದ್ಲೀಪುರದಲ್ಲಿ ಸಮುಚ್ಚಯ ಭವನದ ಕಟ್ಟಡವನ್ನು ನಿರ್ಮಿಸಲಾಗಿತ್ತು. ಇತ್ತೀಚೆಗೆ ಅದರ ಉದ್ಘಾಟನೆಯನ್ನೂ ಮಾಡಲಾಗಿತ್ತು.

Leave a Reply

Your email address will not be published. Required fields are marked *