Breaking
10 May 2026, Sun

ನೀರ್ಚಾಲು ಗ್ರಾಮದ ನಿವೃತ್ತ ಗ್ರಾಮಾಧಿಕಾರಿ, ಸಾಹಿತ್ಯ ಸಾಂಸ್ಕೃತಿಕ, ಸಾಮಾಜಿಕ ರಂಗದ ಪ್ರೋತ್ಸಾಹಕ ದರ್ಬೆತ್ತಡ್ಕ ನಿವಾಸಿ ಕೃಷ್ಣ ಡಿ.ಬೇಳ ನಿಧನ

ಕಾಸರಗೋಡು: ಜಿಲ್ಲೆಯ ನೀರ್ಚಾಲು ಗ್ರಾಮದ ನಿವೃತ್ತ ಗ್ರಾಮಾಧಿಕಾರಿ, ಸಾಹಿತ್ಯ ಸಾಂಸ್ಕೃತಿಕ ,ಸಾಮಾಜಿಕ ರಂಗದ ಪ್ರೋತ್ಸಾಹಕ ದರ್ಬೆತ್ತಡ್ಕ ನಿವಾಸಿ ಕೃಷ್ಣ ಡಿ.ಬೇಳ (77) ಅ.26 ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇವರು ಕುಂಬ್ಡಾಜೆ, ಬೆಳ್ಳೂರು, ಬದಿಯಡ್ಕ , ನೀರ್ಚಾಲು ,ಕಾಸರಗೋಡು ಮೊದಲಾದೆಡೆ ಕಂದಾಯ ಇಲಾಖೆಯಲ್ಲಿ ಗ್ರಾಮಾಧಿಕಾರಿ ಹಾಗೂ ಉನ್ನತ ಉದ್ಯೋಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿ ನೀರ್ಚಾಲಿನಲ್ಲಿ ಖಾಸಗೀಯಾಗಿ ಜನ ಸೇವಾ ಕಚೇರಿ ಸ್ಥಾಪಿಸಿ ಕಾರ್ಯ ನಿರತರಾಗಿದ್ದರು.

ಅಂಬೇಡ್ಕರ್ ವಿಚಾರ ವೇದಿಕೆ, ಸಮತಾ ಸಾಹಿತ್ಯ ವೇದಿಕೆ, ಸವಿ ಹೃದಯದ ಕವಿ ಮಿತ್ರರು,ಹಿರಿಯ ನಾಗರಿಕ ವೇದಿಕೆ ಮೊದಲಾದ ಸಂಘಟನೆಗಳ ಮೂಲಕ ಸಾಹಿತ್ಯ ಸಾಂಸ್ಕೃತಿಕ,ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಇವರು ಹಲವು ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಮಹತ್ತರವಾದ ಪಾತ್ರವಹಿಸಿದ್ದರು.

ಮೃತರು ಮಕ್ಕಳಾದ ಅಶ್ವಿನ್ ರಾಜ್ , ಆಶಾ ಕಿರಣ , ಉಷಾ ಕಿರಣ , ಅಳಿಯ ಗೋಪಾಲಕೃಷ್ಣ ಎಂಬವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *