Breaking
10 May 2026, Sun

ಮಗನ ಅಗಲುವಿಕೆಯಿಂದ ಖಿನ್ನತೆಗೆ ಒಳಗಾಗಿದ್ದ ತಂದೆ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಮಗನ ಅಗಲುವಿಕೆಯಿಂದ ಖಿನ್ನತೆಗೆ ಒಳಗಾಗಿದ್ದ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡುವಿನ ದೇಳಿ ಕುನ್ನುಪಾರ ಬಳಿ ನಡೆದಿದೆ.

ದೇಳಿ ಕುನ್ನುಪಾರ ನಿವಾಸಿ ದಾಮೋದರನ್(52) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಇಂದು ಶನಿವಾರ ಬೆಳಗ್ಗೆ ಇವರ ಮೃತದೇಹ ಮನೆ ಬಳಿಯ ಜನವಾಸವಿಲ್ಲದ ಮನೆಯಲ್ಲಿ ಪತ್ತೆಯಾಗಿದೆ.

ದಾಮೋದರನ್ ರವರ ಪುತ್ರ ಧನುಷ್(27) ಅವರು ಕಳೆದ ಆ. 31 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗನ ನಿಧನದ ಸುದ್ದಿ ತಿಳಿದ ನಂತರ ನಾಪತ್ತೆಯಾಗಿದ್ದ ದಾಮೋದರನ್ ಅವರನ್ನು ಮೇಲ್ಪರಂಬ ಪೊಲೀಸರು ಕಾಸರಗೋಡು ರೈಲು ನಿಲ್ದಾಣದ ಬಳಿಯಿಂದ ಪತ್ತೆಹಚ್ಚಿ ತಂದಿದ್ದರು.

ಮೃತರು ಪತ್ನಿ ಗೀತಾ, ಮಕ್ಕಳಾದ ಧನ್ಯ, ದೀಕ್ಷಿತ್, ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ

Leave a Reply

Your email address will not be published. Required fields are marked *