ಉತ್ತರ ಪ್ರದೇಶ: ಸರ್ಕಾರಿ ಕೆಲಸಕ್ಕಾಗಿ ತನ್ನ ಹೆತ್ತ ತಾಯಿಯನ್ನೇ ಮಗನೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾದ ಪಂಡಿತ್ ಪೂರ್ವ ಗ್ರಾಮದಲ್ಲಿ ನಡೆದಿದೆ.

ಗೊಂಡಾ ನಗರ ಪಾಲಿಕೆಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿದ್ದ ಕಾಂತಿ ದೇವಿ (58) ಮೃತ ದುರ್ದೈವಿಯಾಗಿದ್ದು, ಹಿರಿಯ ಮಗ ಸಂದೀಪ್ ವಾಲ್ಮೀಕಿ ಕೊಲೆ ಆರೋಪಿಯಾಗಿದ್ದಾನೆ.

ಕಾಂತಿ ದೇವಿ ಅವರು ತಮ್ಮ ಹಿರಿಯ ಮಗ ಸಂದೀಪ್ ವಾಲ್ಮೀಕಿ ಅವರೊಂದಿಗೆ ಪಂಡಿತ್ ಪೂರ್ವ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರ ಪತಿ ಕೂಡ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದು ತನ್ನ ಮೃತ ಗಂಡನ ಸರ್ಕಾರಿ ಕೆಲಸವನ್ನು ಅನುಕಂಪದ ಆಧಾರದ ಮೇಲೆ ಕಿರಿಯ ಮಗನಿಗೆ ತೆಗೆಸಿ ಕೊಟ್ಟಿದ್ದರು. ಈ ಬಗ್ಗೆ ಹಿರಿಯ ಮಗ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದ. ಇದು ಅವರ ಹಿರಿಯ ಮಗನೊಂದಿಗಿನ ವಿವಾದಗಳಿಗೆ ಕಾರಣವಾಯಿತು.

ಈ ಬಗ್ಗೆ ಗೊಂಡಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


