Breaking
10 May 2026, Sun

ಧಾರ್ಮಿಕ ಉಡುಪಿನಲ್ಲೇ ಬರಿಗಾಲಿನಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದ ಕ್ರೈಸ್ತ ಸನ್ಯಾಸಿನಿ

ಕೇರಳ: ಕ್ರೈಸ್ತ ಸನ್ಯಾಸಿನಿಯೊಬ್ಬರು ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ ಹರ್ಡಲ್ಸ್ ಸ್ಪರ್ಧೆಯಲ್ಲಿ ಧಾರ್ಮಿಕ ಉಡುಪಿನಲ್ಲೇ ಬರಿಗಾಲಿನಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾನಂತವಾಡಿಯ ದ್ವಾರಕಾ ಎಯುಪಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸಿಸ್ಟರ್ ಸಬೀನಾ(55) ಅವರು ಸ್ಪರ್ಧೆಯಲ್ಲಿ ಸ್ಪರ್ಧಿಸಿ ಸುದ್ದಿಯಾದ ಕ್ರೈಸ್ತ ಸನ್ಯಾಸಿನಿಯಾಗಿದ್ದಾರೆ.

1990 ರ ದಶಕದಲ್ಲಿ ವಯನಾಡಿಗೆ ತೆರಳಿ ನೆಲೆಸಿದ್ದ ಕಾಸರಗೋಡು ಮೂಲದ ಸಿಸ್ಟರ್ ಸಬೀನಾ, ಮುಂದಿನ ಮಾರ್ಚ್ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ನಿವೃತ್ತಿಗೂ ಮೊದಲು ನನ್ನ ಕೊನೆಯ ಸ್ಪರ್ಧೆ ಇದಾಗಿರಬಹುದು ಎಂದು ಹೇಳಿದ್ದಾರೆ.

ಓಟದ ವೇಳೆ ಸಿಸ್ಟರ್ ಸಬೀನಾ ಅವರು ಅಡೆತಡೆಗಳನ್ನು ಸಲೀಸಾಗಿ ಜಿಗಿಯುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *