ಬಂಟ್ವಾಳ: 20ನೇ ಶತಮಾನದ ಇತಿಹಾಸ ಪುರುಷರೂ ಲಕ್ಷಾಂತರ ಪಂಡಿತ ಶಿಷ್ಯ ವೃಂದದ ಗುರುವರ್ಯರೂ ವಿದ್ವತ್ ಜಗತ್ತಿನ ಸೂರ್ಯನೂ ಆದ ಶೈಖುನಾ ಶಂಸುಲ್ ಉಲಮಾ ಇ.ಕೆ ಅಬೂಬಕ್ಕರ್ ಮುಸ್ಲಿಯಾರ್ರವರ ಮೂವತ್ತನೇ ಅಂಡ್ ನೇರ್ಚೆ, ಕಾಸರಗೋಡಿನ ಕುಣಿಯ ಎಂಬಲ್ಲಿ 2026 ಫೆಬ್ರವರಿ 4ರಿಂದ 8ರ ತನಕ ನಡೆಯುವ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 100ನೇ ವಾರ್ಷಿಕ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ ಹಾಗೂ ದಾರಿಮಿ ಪಂಡಿತರ ಕೇಂದ್ರ ಸಂಸ್ಥೆಯಾದ ನಂದಿ ದಾರುಸ್ಸಲಾಮ್ ವಿಶ್ವವಿದ್ಯಾಲಯದ 50ನೇ ವಾರ್ಷಿಕದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ದಾರಿಮೀನ್ ಅಸೋಸಿಯೇಷನ್ ವತಿಯಿಂದ ಅಕ್ಟೋಬರ್ 21ನೇ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಪಾಣೆಮಂಗಳೂರು ಅಕ್ಕರಂಗಡಿ ಹೆಚ್.ಹೆಚ್ ಕನ್ವೆನ್ಸನ್ ಸೆಂಟರಿನಲ್ಲಿ ಅನುಸ್ಮರಣಾ ಸಮ್ಮೇಳನ ಹಾಗೂ ಪ್ರಚಾರ ಸಭೆ ನಡೆಯಲಿದೆ.

ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷರಾದ ಸಮ್ಮಿದುಲ್ ಉಲಮಾ ಶೈಖುನಾ ಸಯ್ಯದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ಸಮಾರಂಭವನ್ನು ಉದ್ಘಾಟಿಸಲಿದ್ದು ಜಾಮಿಲಿ ದಾರುಸ್ಸಲಾಮಿನ ಶೈಖುನಾ ಎ.ವಿ. ಅಬ್ದುರಹ್ಮಾನ್ ಮುಸ್ಲಿಯಾರ್ ರವರು ಅನುಸ್ಮರಣಾ ಭಾಷಣ ಮಾಡಲಿದ್ದು ಸಮಸ್ತ ಕೇಂದ್ರ ಮುಶಾವರದ ಸದಸ್ಯರಾದ ಶೈಖುನಾ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣರವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದು ಶೈಖುನಾ ಉಸ್ಮಾನುಲ್ ಫೈಝಿ ತೋಡಾರುರವರು ಸಂದೇಶ ಭಾಷಣ ಮಾಡಲಿದ್ದಾರೆ.

ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಬಳ್ ಬೆಳ್ತಂಗಡಿಯವರು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದು ಜಿಲ್ಲಾ ದಾರಿಮೀಸ್ ಸಮಿತಿಯ ಅಧ್ಯಕ್ಷರಾದ ಕೆ.ಬಿ ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿಯವರು ಸಭೆಯ ಅಧ್ಯಕ್ಷತೆ ವಹಿಸಲಿದ್ದು ಸ್ವಾಗತ ಸಮಿತಿಯ ಕನ್ವೀನರ್ ಕೆ.ಎಂ ಖಾಸಿಮ್ ದಾರಿಮಿ ಸವಣೂರು ಸ್ವಾಗತಿಸಲಿದ್ದಾರೆ. ಝುಬೈರ್ ದಾರಿಮಿ ಅಕ್ಕರಂಗಡಿ, ಎಸ್.ಹೆಚ್ ಹೈದರ್ ದಾರಿಮಿ ಅಸೈಗೋಳಿ ಆಶಂಸಾ ಭಾಷಣ ಮಾಡಲಿದ್ದು ಹನೀಫ್ ದಾರಿಮಿ ಸವಣೂರು ವಂದಿಸಲಿದ್ದಾರೆ.

ಸಾರ್ವಜನಿಕರೆಲ್ಲರೂ ಪ್ರಸ್ತುತ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.
ಈ ಪತ್ರಿಕಾಗೋಷಿಯಲ್ಲಿ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಕೆ.ಬಿ ದಾರಿಮಿ ಕೊಡುಂಗಾಯಿ, ಎಸ್.ಹೆಚ್ ಹೈದರ್ ದಾರಿಮಿ ಅಸೈಗೋಳಿ ಉಪಸ್ಥಿತರಿದ್ದರು.


