Breaking
20 Sep 2026, Sun

ಆಟೋ ಚಾಲಕನ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ,ಇಬ್ಬರು ಅಧಿಕಾರಿಗಳು ಅಮಾನತು

ಪುತ್ತೂರು: ತಾಲೂಕಿನ ದರ್ಬೆಯಲ್ಲಿ ಆಟೋ ಚಾಲಕನನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿದ ಇಬ್ಬರು ಸಂಚಾರಿ ಪೊಲೀಸರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಎ.ಎಸ್.ಐ ಚಿದಾನಂದ ರೈ ಹಾಗೂ ಸಿಪಿಸಿ ಶ್ರೀ ಶೈಲ ಎಂ ಕೆ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ.

ಕುರಿಯ ಗ್ರಾಮ ನಿವಾಸಿಯಾಗಿರುವ ಆಟೋ ಚಾಲಕ ಬಶೀರ್ ಅವರು ಅ.17 ರಂದು ಸಂಜೆ ಸಮವಸ್ತ್ರ ಧರಿಸದೇ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ ಪುತ್ತೂರು ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಚಿದಾನಂದ ರೈ ಮತ್ತು ಶೈಲ ಎಂ ಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗಿರುತ್ತದೆ. ಈ ವಿಡಿಯೋವನ್ನು ಪರಿಶೀಲಿಸಿ ಇಬ್ಬರು ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *