Breaking
20 Sep 2026, Sun

ಕಾರ್ಕಳದ ಪ್ಲಾಸ್ಟಿಕ್ ಹಾಗೂ ರಟ್ಟಿನ ಫ್ಯಾಕ್ಟರಿಯಲ್ಲಿ ಹೊತ್ತಿಕೊಂಡ ಬೆಂಕಿ

ಕಾರ್ಕಳ : ಶಾರ್ಟ್ ಸರ್ಕ್ಯೂಟ್‌ನಿಂದ ಪ್ಲಾಸ್ಟಿಕ್ ಹಾಗೂ ರಟ್ಟಿನ ಫ್ಯಾಕ್ಟರಿಯಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಕಾರ್ಕಳ ತಾಲೂಕಿನಲ್ಲಿ ಅ.17 ರಂದು ಬೆಳಗ್ಗೆ ನಡೆದಿದೆ.

ಶುಕ್ರವಾರ ಸಂಜೆ ಗುಡುಗಿನ ಆರ್ಭಟಕ್ಕೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಪರಿಣಾಮ ಫ್ಯಾಕ್ಟರಿಯಲ್ಲಿದ್ದ ಪ್ಲಾಸ್ಟಿಕ್ ಮೆಲ್ಟ್ ಆಗಿದೆ ಎಂದು ತಿಳಿದು ಬಂದಿದೆ. ಮೂಡುಬಿದಿರೆಯ ನರಸಿಂಹ ನಾಯಕ್ ಅವರಿಗೆ ಸೇರಿದ ಕಟ್ಟಡ ಇದಾಗಿದ್ದು, ರಾಂ ಬಹುದ್ದೂರ್ ಎಂಬವರು ಕಳೆದ 11 ವರ್ಷಗಳಿಂದ ಶ್ರೀರಾಮ್ ಎಂಟರ್ ಪ್ರೈಸಸ್ ನಡೆಸುತ್ತಿದ್ದರು ಅನ್ನುವ ಮಾಹಿತಿ ಲಭ್ಯವಾಗಿದೆ.

ಈ ವೇಳೆ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ದೊಡ್ಡ ಅನಾಹುತ ತಪ್ಪಿಸಿದ್ದಾರೆ.

Leave a Reply

Your email address will not be published. Required fields are marked *