ಕಾಸರಗೋಡು: ಜಿಲ್ಲೆಯ ಮುನ್ನಾಡ್ ನಿವಾಸಿ ದುಬೈನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ.
ಮುನ್ನಾಡು ಪರಿಂಗಾನಂ ನಿವಾಸಿ ಕೆ.ಸುಧೀಶ್(30) ಆತ್ಮಹತ್ಯೆಗೈದ ಯುವಕನಾಗಿದ್ದಾನೆ. ಈತ ಕಳೆದ ಒಂದು ವರ್ಷದಿಂದ ದುಬೈಯ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ.

ಅ. 8 ರಂದು ಈತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮೃತ ಸುಧೀಶ್ ತಂದೆ, ತಾಯಿ, ಸಹೋದರರಾದ ವಿನೀತ್, ವಿನಯನ್ ರನ್ನು ಅಗಲಿದ್ದಾರೆ.




