Breaking
28 Jun 2026, Sun

ತಾಕೊಡೆಯಲ್ಲಿ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ ತೆರವುಗೊಳಿಸಿದ ಸ್ಥಳೀಯರು

ಬಂಟ್ವಾಳ: ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಬೃಹತ್ ಗಾತ್ರದ ಮರ ಒಂದು ಮುಖ್ಯ ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತವಾದ ಘಟನೆ ಮೂಡಬಿದ್ರೆ ತಾಲೂಕಿನ ತಾಕೊಡೆ ಪರಿಸರದಲ್ಲಿ ನಡೆದಿದೆ.

ಇದರಿಂದ ಮೂಡುಬಿದರೆ ಬಂಟ್ವಾಳ ರಸ್ತೆ ಸಂಪರ್ಕವು ತಾಸುಗಟ್ಟಲೆ ವಿಳಂಬಗೊಂಡಿದೆ. ಮರ ಬಿದ್ದ ಪರಿಣಾಮ ಕೆಲವರು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದು ವಿದ್ಯುತ್ ಸಂಪರ್ಕವು ಕಡಿತಗೊಂಡಿದೆ.

ಈ ವೇಳೆ ಸ್ಥಳೀಯ ನಿವಾಸಿಗಳಾದ ರಫೀಕ್, ರೋಷನ್ ಹಾಗೂ ಇತರರು ಜೆಸಿಬಿ ಮತ್ತು ಇತರ ಯಂತ್ರಗಳ ಸಹಾಯದಿಂದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Leave a Reply

Your email address will not be published. Required fields are marked *