Breaking
9 Aug 2026, Sun

ಆರ್‌ಎಸ್‌ಎಸ್ ದೇಶಭಕ್ತ ಸಂಘಟನೆ ಎನ್ನುವುದು ಜನರಿಗೆ ಮನವರಿಕೆಯಾಗಿದೆ- ಸಿ.ಟಿ. ರವಿ

ಚಿಕ್ಕಮಗಳೂರು: ದೇಶಭಕ್ತಿಯ ವಿಚಾರದಲ್ಲಿ ಪೊಳ್ಳು, ದೇಶ ಹಾಳು ಮಾಡುವ ವಿಚಾರವಾಗಿದ್ದರೇ ಆರ್‌ಎಸ್‌ಎಸ್ ಸಂಘಟನೆ ಈ ಪ್ರಮಾಣದಲ್ಲಿ ಬೆಳೆಯುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಆರ್‌ಎಸ್‌ಎಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಸಂಘದಲ್ಲಿರುವುದು ನಿಸ್ವಾರ್ಥವಾದ ದೇಶಪ್ರೇಮ ಹಾಗಾಗಿ ಅದು ಬೆಳೆಯುತ್ತಾ ಹೋಗಿದೆ.

ಕಾಂಗ್ರೆಸ್ ಸೇವಾ ದಳ ಖುರ್ಚಿ ಹತ್ತಲು, ಪಕ್ಷದ ನಾಯಕರಿಗೆ ಜೈಕಾರ ಹಾಕಲು ಬಳಕೆ ಮಾಡಿಕೊಂಡರು ಇಂದು ನೂರು ವರ್ಷ ಆಗುತ್ತಿದೆ ಎಂದು ಯಾರಾದರೂ ನೆನಪು ಮಾಡಿಕೊಳ್ಳುತ್ತಿದ್ದಾರಾ ಎಂದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಣವೇಷಗಳನ್ನು ಪೂರೈಸಲು ಸಾಧ್ಯವಾಗದಷ್ಟು ಬೇಡಿಕೆ ಏಕೆ ಬರುತ್ತಿದೆ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶಭಕ್ತ ಸಂಘ ಎನ್ನುವುದು ಜನರಿಗೆ ಮನವರಿಕೆಯಾಗಿದೆ ಎಂದರು.

Leave a Reply

Your email address will not be published. Required fields are marked *