ಶಿವಮೊಗ್ಗ: ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಎರಡು ವಾಹನಗಳು ಉಜ್ಜಿಕೊಂಡು ಅದನ್ನು ತಪ್ಪಿಸಲು ಹೋದ ಕಾರೊಂದು ಚರಂಡಿಗೆ ಬಿದ್ದು ಪಲ್ಟಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಅ.17 ರಂದು ನಡೆದಿದೆ.

ಪಟ್ಟಣದ ಕುಶಾವತಿ ಸಮೀಪ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಹೊಂಡ ಗುಂಡಿಗಳು ಅತಿ ಹೆಚ್ಚಾಗಿದ್ದು ಇದನ್ನು ತಪ್ಪಿಸಲು ಹೋದ ವಾಹನ ಸವಾರರು ದಿನಂಪ್ರತಿ ಬೀಳುವಂತಾಗಿದೆ. ಅಷ್ಟೇ ಅಲ್ಲದೆ ವಾಹನಗಳು ಅಪಘಾತಕ್ಕೆ ಈಡಾಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಅಧಿಕಾರಿಗಳು ಕೂಡಲೇ ರಸ್ತೆಯ ಮಧ್ಯೆ ಇರುವ ಹೊಂಡ ಗುಂಡಿಗಳನ್ನು ಮುಚ್ಚಿಸಲು ಸ್ಥಳೀಯರು, ವಾಹನ ಸವಾರರು ಆಗ್ರಹಿಸಿದ್ದಾರೆ.




