Breaking
23 Jun 2026, Tue

ಹನಿಟ್ರ್ಯಾಪ್ ಮಾಡಿದ ಆರೋಪ, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ: ಎರಡನೇ ಮದುವೆಯಾಗಲು ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ನಡೆಸಿದ ಬಂಟ್ವಾಳ ಮೂಲದ ತಂಡ ಸಂತ್ರಸ್ತನಿಂದ 45 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಿದ ಆರೋಪ ಕೇಳಿ ಬಂದಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಲ್ಫ್ ಉದ್ಯಮಿ ಕೇರಳದ ತಾವರಕಡನ್ ಮೂಲದ ಮಹಮ್ಮದ್ ಅಶ್ರಫ್ ಸಂತ್ರಸ್ತರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಹನಿಟ್ರ್ಯಾಪ್ ನಡೆಸಿದ ರಿಯಾಝ್, ಮುಸ್ತಫಾ ಬಂದರ್, ಸಫಿಯಾ ಮಾಣಿ, ಸರಪುದ್ದೀನ್, ವಿಟ್ಲ ಹಸೈನಾರ್ ಎಂಬವರ ವಿರುದ್ಧ ಸಂತ್ರಸ್ತ ಮಹಮ್ಮದ್ ಅಶ್ರಫ್ ಅವರು ದೂರು ನೀಡಿದ್ದಾರೆ.

ಸಂತ್ರಸ್ತ ನೀಡಿರುವ ದೂರಿನಲ್ಲಿ, ನನ್ನ ಫೋನ್ ನಂಬರಿಗೆ ಬೇರೆ ಬೇರೆ ವ್ಯಕ್ತಿಗಳು ಕರೆ ಮಾಡಿ ಈ ಪ್ರಕರಣದಿಂದ ಆರೋಪಿಗಳನ್ನು ಕೈಬಿಡಬೇಕು ಮತ್ತೊಂದು ಕರೆಯಲ್ಲಿ ನಿಮ್ಮನ್ನು ನಾವು ಹೊರಗಡೆ ನೋಡುತ್ತೇವೆ, ಆರೋಪಿಗಳನ್ನು ಕೈ ಬಿಡಿ ಅವರು ಮಗ್ಧರು. ಈ ರೀತಿ ನನ್ನಲ್ಲಿ ಹೇಳಿದ್ದಾರೆ.

ಸೇಫಿಯಾ ಮಾಣಿ ಎಂಬ ಆರೋಪಿ ಈ ರೀತಿ ಕರೆ ಮಾಡಿ ಕೇಸ್ ವಾಪಸು ಪಡೆಯದಿದ್ದರೆ ವೀಡಿಯೋ, ಫೋಟೋ ಅವರ ಜಮಾತಿಗೆ ಅವರ ಪತ್ನಿ ಸಂಬಂಧಿಕರಿಗೆ ನೀಡುತ್ತೇನೆ, ಬಳಿಕ ನನ್ನ ಸಹೋದರನಿಗೆ ಕರೆ ಮಾಡಿ ಕಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ನನ್ನ ಸಹೋದರ ಕೇರಳದಲ್ಲಿ ದೂರು ನೀಡಿದ್ದಾರೆ. ನನಗೆ ಈ ಮೇಲಿನ ನಂಬರ್ ನಿಂದ ಬೆದರಿಕೆ ಕರೆ ಬರುತ್ತಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮತ್ತು ರಕ್ಷಣೆ ನೀಡಬೇಕು ಎಂದು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *