Breaking
23 Mar 2026, Mon

ಪ್ರೀತಿ ಶೆಣೈ ಅವರ ಕಾದಂಬರಿಗಳಲ್ಲಿ ಮಹಿಳಾ ನಾಯಕಿಯರ ಮಾನಸಿಕ ವಿಶ್ಲೇಷಣೆ ಕುರಿತು ಪ್ರಬಂಧಕ್ಕೆ ಸುಧೀಕ್ಷಾ ಪೈ ಅವರಿಗೆ ಪಿಎಚ್.ಡಿ. ಪದವಿ

ಕಾರ್ಕಳ: ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಶ್ರೀಮತಿ ಸುಧೀಕ್ಷಾ ಪೈ ಅವರು “A Psychoanalytical Study of Women Protagonists in Select Novels of Preeti Shenoy”” ಎಂಬ ಶೀರ್ಷಿಕೆಯ ಪ್ರಬಂಧವನ್ನು ಯಶಸ್ವಿಯಾಗಿ ನಿರ್ವಹಿಸಿ ಡಾಕ್ಟರ್ ಆಫ್ ಫಿಲಾಸಫಿ (Ph.d.) ಪದವಿಯನ್ನು ಪಡೆದಿದ್ದಾರೆ. ಈ ಸಂಶೋಧನೆ ಶ್ರೀ ಲೂರ್ದುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಂಡಿದೆ.

ಸುಧೀಕ್ಷಾ ಪೈ ಅವರು ಬಾಳೆಹೊನ್ನೂರು ನಿವಾಸಿಗಳಾದ ಸುರೇಂದ್ರ ಪೈ ಮತ್ತು ಸುಧಾ ಪೈ ಅವರ ಪುತ್ರಿ. ಅವರು ಕ್ರಿಯೇಟಿವ್ ಪಿಯು ಕಾಲೇಜು ಕಾರ್ಕಳದ ಉಪನ್ಯಾಸಕರಾದ ಮಹೇಶ್ ಶೆಣೈ ಅವರ ಪತ್ನಿ ಹಾಗೂ ಪೂರ್ಣಿಮಾ ಶೆಣೈ ನಿವೃತ್ತ ಮುಖ್ಯೋಪಾಧ್ಯಾಯರು ಸರಕಾರಿ ಪ್ರಾಥಮಿಕ ಶಾಲೆ ಪರಪ್ಪಾಡಿ ಅವರ ಸೊಸೆಯಾಗಿದ್ದಾರೆ.

ಪ್ರಸ್ತುತ ಅವರು ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪೂರ್ವದಲ್ಲಿ ಎನ್ಎಂಎಎಮ್ಐಟಿ (Ph.D.) ನಿಟ್ಟೆ ಸಂಸ್ಥೆಯಲ್ಲಿ ಸಹ ಸೇವೆ ಸಲ್ಲಿಸಿದ್ದಾರೆ.

ಪ್ರೀತಿ ಶೆಣೈ ಅವರ ಕಾದಂಬರಿಗಳಲ್ಲಿನ ಮಹಿಳಾ ನಾಯಕಿಯರ ಮನೋವೈಜ್ಞಾನಿಕ ಅಂಶಗಳ ವಿಶ್ಲೇಷಣೆಯು ಸುಧೀಕ್ಷಾ ಪೈ ಅವರ ಸಂಶೋಧನೆಗೆ ಶೈಕ್ಷಣಿಕ ವಲಯದಿಂದ ವಿಶಿಷ್ಟ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *