Breaking
25 Sep 2026, Fri

ಉಡುಪಿಯಲ್ಲಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆ ಕೊಟ್ಟ ಆರೋಪ, ಪ್ರಕರಣ ದಾಖಲು

ಉಡುಪಿ: ಪರವಾನಿಗೆ ಇಲ್ಲದೆ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆ ಕೊಟ್ಟ ಆರೋಪದ ವ್ಯಕ್ತಿಯೊಬ್ಬರ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಂಕನಿಡಿಯೂರು ಗ್ರಾಮದ ಬೆಳ್ಕಲೆ ಹಿರಣ್ಯಧಾಮ ಲೇಔಟ್ ನಿವಾಸಿ ಆರ್.ರಶೀದ್ ಎಂಬವರ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ (ರಿ) ಮಲ್ಪೆ ಘಟಕ ಇದರ ಅಧ್ಯಕ್ಷರು ಮತ್ತು ಸದಸ್ಯರು ಪರವಾನಿಗೆ ಇಲ್ಲದೆ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆ ಕೊಡುತ್ತಿದ್ದಾರೆ ಎಂದ ದೂರು ನೀಡಿದ್ದಾರೆ.

ಈ ಕುರಿತು ತನಿಖೆ ನಡೆಸಿದಾಗ ರಶೀದ್ ಅವರ ಮನೆಯಲ್ಲಿ ವಿವಿಧ ಮಾದರಿಯ ಸುಮಾರು ಹದಿನೆಂಟು ವೈಟ್ ಬೋರ್ಡ್ ಕಾರುಗಳು ಪತ್ತೆಯಾಗಿದ್ದು, ಪರವಾನಿಗೆ ಪಡೆಯದೇ ಕಾರುಗಳನ್ನು ಬಾಡಿಗೆಗೆ ನೀಡುವುದನ್ನು ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಪ್ರಕರಣಕ್ಕೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ರಶೀದ್ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *