Breaking
24 Jun 2026, Wed

ನೆಲ್ಯಾಡಿಯ ಹೆಸರಾಂತ ಗೋಕುಲ್ ಸ್ವೀಟ್ಸ್ ಸಂಸ್ಥೆಯ ಸಂಸ್ಥಾಪಕರಾದ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ನಿವಾಸಿ, ಉದ್ಯಮಿ ಲಕ್ಷ್ಮಣ ಗೌಡ ನಿಧನ

ನೆಲ್ಯಾಡಿ: ನೆಲ್ಯಾಡಿಯ ಹೆಸರಾಂತ ಗೋಕುಲ್ ಸ್ವೀಟ್ಸ್ ಸಂಸ್ಥೆಯ ಸಂಸ್ಥಾಪಕರಾದ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ನಿವಾಸಿ, ಉದ್ಯಮಿ ಲಕ್ಷ್ಮಣ ಗೌಡ(73) ಅಲ್ಪಕಾಲದ ಅನಾರೋಗ್ಯದಿಂದ ಅ.15 ರಂದು ನಿಧನರಾಗಿದ್ದಾರೆ.

ಕಳೆದ ಸುಮಾರು 15 ದಿನಗಳ ಹಿಂದೆ ಪಾರ್ಶ್ವವಾಯುವಿನ ಪರಿಣಾಮದಿಂದಾಗಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಮಧ್ಯಾಹ್ನ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದರು.

ಲಕ್ಷ್ಮಣ ಗೌಡರು ಕಳೆದ ಸುಮಾರು ಐವತ್ತು ವರ್ಷಗಳಿಂದ ‘ನೆಲ್ಯಾಡಿ ಗೋಕುಲ್ ಸ್ವೀಟ್ಸ್’ ಎಂಬ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಾ ಜನಪ್ರಿಯವಾಗಿ ‘ಗೂಡಂಗಡಿ ಲಕ್ಷ್ಮಣ’ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು.

ಮೃತರು ಎರಡು ಹೆಣ್ಣು ಹಾಗೂ ಒಂದು ಗಂಡು ಮಗನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *