ಕಾಸರಗೋಡು: ನರ್ಸಿಂಗ್ ಕಲಿಯುತ್ತಿದ್ದ ಯುವತಿಯ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡು ಬೇಡಗಂ ಪೊಲೀಸ್ ಠಾಣಾ ವ್ಯಾಪ್ತಿಯ ಬೇತೂರುಪಾರ ತಚ್ಚರಕುಂಡ್ ಎಂಬಲ್ಲಿ ನಡೆದಿದೆ.

ಮೃತಳನ್ನು ತಚ್ಚರಕುಂಡ್ ನಿವಾಸಿ ಬಾಬು ಎಂಬವರ ಪುತ್ರಿ ಮಹಿಮ(20) ಎಂದು ಗುರುತಿಸಲಾಗಿದೆ.
ಅ.15 ರಂದು ಬೆಳಗ್ಗೆ 7.30 ರ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಕೂಡಲೇ ಹಗ್ಗ ತುಂಡರಿಸಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಇದೇ ವೇಳೆ ಮಹಿಮಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಇನ್ನೊಂದು ವಾಹನದಲ್ಲಿ ಕೊಂಡೊಯ್ಯಲಾಗಿತ್ತು.

ಮೃತಳು ತಾಯಿ ವನಜ, ಸಹೋದರ ಮಹೇಶ್ ಎಂಬಿವರನ್ನು ಅಗಲಿದ್ದಾರೆ. ಮಹಿಮ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬೇಡಗಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



