Breaking
10 Aug 2026, Mon

ಬೆಳ್ತಂಗಡಿಯಲ್ಲಿ ಸ್ಥಗಿತಗೊಂಡ ಬಸ್ ನಿಲ್ದಾಣದ ಕಾಮಗಾರಿ ಪುನರಾರಂಭಿಸುವಂತೆ ಶಾಸಕ ಹರೀಶ್ ಪೂಂಜ‌ ಸೂಚನೆ

ಬೆಳ್ತಂಗಡಿ: ತಾಲೂಕು ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ‌ ಅವರು ಅಧಿಕಾರಿಗಳ‌ ಸಭೆ ನಡೆಸಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದಾರೆ.

ಕಾಮಗಾರಿ ಸ್ಥಗಿತಗೊಂಡು ಬಸ್ ನಿಲ್ದಾಣ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟ ಬಗ್ಗೆ “ಬೆಳ್ತಂಗಡಿ ಸಮಾಚಾರ” ಸಮಗ್ರವಾದ ವರದಿಯನ್ನು ಪ್ರಸಾರ ಮಾಡಿತ್ತು.

ಈ ಬಗ್ಗೆ ಶಾಸಕರು ಕೆ.ಎಸ್.ಆರ್.ಟಿ.ಸಿ ಅಧಿಕಾರಿ, ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಯನ್ನು ಮುಕ್ತಾಯಗೊಳಿಸುವ ಸಂಬಂಧ ಇರುವ ಅಡಚಣೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *