ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಮೂವರು ಬಾಲಕರು ಸಮುದ್ರಪಾಲಾಗಿ ಓರ್ವ ಅಪಾಯದಿಂದ ಪಾರಾದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಬೀಚ್ ನಲ್ಲಿ ಅ.14ರಂದು ನಡೆದಿದೆ.

ಸಂಕೇತ್ (16), ಸೂರಜ್ (15), ಆಶೀಶ್ (14) ನೀರು ಪಾಲಾಗಿದ್ದು, ಈ ಮೂವರು ಕೂಡ ಸ್ಥಳೀಯರು ಎಂಬುದು ತಿಳಿದು ಬಂದಿದೆ.
ಈಜಲು ತೆರಳಿದ್ದ ನಾಲ್ವರಲ್ಲಿ ಓರ್ವ ಪಾರಾಗಿದ್ದು, ನೀರುಪಾಲಾದ ಮೂವರ ಮೃತದೇಹ ಪತ್ತೆಯಾಗಿದೆ.




