Breaking
10 May 2026, Sun

ಗುಡ್ಡದಿಂದ ಬಂಡೆಕಲ್ಲು ಬಿದ್ದು ಮನೆಗೆ ಹಾನಿ

ಬಂಟ್ವಾಳ: ಅಮ್ಟಾಡಿ ಗ್ರಾಮದ ಪಡಾಮಕಿಲಮಾರ್ ಎಂಬಲ್ಲಿ ಮನೆಯ ಗೋಡೆಯ ಮೇಲೆ ಬಂಡೆಕಲ್ಲು ಬಿದ್ದು ಹಾನಿಯಾದ ಘಟನೆ ಅ. 12 ರಂದು ನಡೆದಿದೆ.

ಕಳೆದ ಕೆಲ ದಿನಗಳಿಂದ ಸಿಡಿಲು ಗುಡುಗಿನ ಅಬ್ಬರ ಹೆಚ್ಚಾಗಿದ್ದು ಅ.12 ರಂದು ಸುರಿದ ಭಾರೀ ಮಳೆಗೆ ರವೀಂದ್ರ ಎಂಬವರ ವಾಸ್ತವ್ಯದ ಮನೆಯ ಹಿಂಭಾಗದಲ್ಲಿರುವ ಗುಡ್ಡದಿಂದ ಬಂಡೆಕಲ್ಲು ಉರುಳಿ ಬಿದ್ದಿದೆ. ಮಣ್ಣಿನ ಗೋಡೆಯ ಮನೆಯಾಗಿರುವುದರಿಂದ ಗೋಡೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *