Breaking
24 Mar 2026, Tue

ಮುದ್ದೇಬಿಹಾಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 19 ವರ್ಷದ ಯುವತಿ ಪತ್ತೆ

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಮುದ್ದೇಬಿಹಾಳ ತಾಲೂಕು ಬನೋಶಿ ಗ್ರಾಮದ ಬಸಮ್ಮ ಮಾನಪ್ಪ ಚಲವಾದಿ(19) ಎಂಬಾಕೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ.

ಇನ್ನು ಮದುವೆಯಾಗದ ಆಕೆಯ ಕೊರಳಲ್ಲಿ ತಾಳಿ ಇರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದು ಪೋಷಕರು ಕೊಲೆ ಮಾಡಿ ನೇತು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *