Breaking
23 Mar 2026, Mon

ಬೆಳ್ತಂಗಡಿಯಲ್ಲಿ ಸರಕಾರಿ ಬಸ್ ನಲ್ಲಿ ಪ್ರಯಾಣಿಕನ ಮೇಲೆ ಲೇಡಿ ಕಂಡಕ್ಟರ್ ಹಲ್ಲೆ

ಬೆಳ್ತಂಗಡಿ: ಸರಕಾರಿ ಬಸ್ ವೊಂದರಲ್ಲಿ ಟಿಕೇಟ್ ವಿಚಾರದಲ್ಲಿ ನಡೆದ ಗಲಾಟೆ ತಾರಕಕ್ಕೇರಿ ಪ್ರಯಾಣಿಕನ ಮೇಲೆ ಲೇಡಿ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ಅ.10ರಂದು ನಡೆದಿದೆ.

ಮೂಡಿಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಈ ಗಲಾಟೆಯಾಗಿದೆ.

ಉಜಿರೆಯಲ್ಲಿ ಬಸ್ ಹತ್ತಿದ ಪ್ರಯಾಣಿಕನೊಬ್ಬ ಟಿಕೆಟ್ ಹಣ ಕೊಟ್ಟಿದ್ದೇನೆ ಅಂತ ವಾದಿಸುತ್ತಿದ್ದರೆ, ಲೇಡಿ ಕಂಡಕ್ಟರ್ ಹಣ ಕೊಟ್ಟಿಲ್ಲ ಅಂತ ವಾದಿಸುತ್ತಿದ್ದರು. ಬಸ್ ನಲ್ಲಿದ್ದ ಪ್ರಯಾಣಿಕರು ಆತ ಹಣ ಕೊಟ್ಟಿದ್ದಾನೆ ಅಂತ ಸ್ಥಳದಲ್ಲಿ ತಿಳಿಸಿದರು.

ಬಸ್ ನಲ್ಲಿದ್ದ ಪ್ರಯಾಣಿಕರು ಕಂಗಾಲಾದರು. ಈ ವೇಳೆ ಬೆಳ್ತಂಗಡಿ ಪೊಲೀಸರು ಮದ್ಯ ಪ್ರವೇಶಿಸಿ, ಕಂಡಕ್ಟರ್ ಮತ್ತು ಪ್ರಯಾಣಿಕನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬೆಳ್ತಂಗಡಿ ಟಿಸಿ ಬದಲಿ ವ್ಯವಸ್ಥೆ ಮಾಡಿದರು.

ಬಳಿಕ ಬೆಳ್ತಂಗಡಿಯಲ್ಲೇ ನಿಂತ ಬಸ್ ಗೆ ಬದಲಿ ವ್ಯವಸ್ಥೆ ಮಾಡಿ ಕಳುಹಿಸಲಾಗಿದೆ. ಘಟನೆಯ ವೀಡಿಯೋವನ್ನು ಮಾಡುತ್ತಿದ್ದ ಮಾಧ್ಯಮದವರ ಮೊಬೈಲ್ ಕೂಡ ಲೇಡಿ ಕಂಡಕ್ಟರ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *