ಮಂಗಳೂರು: ಕೇರಳ ರಾಜ್ಯದ ಕುಖ್ಯಾತ ಅಂತರ್ ರಾಜ್ಯ ವಾಹನ ಕಳ್ಳನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿಯನ್ನು ಕೇರಳದ ತಿರುವನಂತಪುರದ ಹಂಝ ಕುಪ್ಪಿಕಂಡ ಎಂದು ಗುರುತಿಸಲಾಗಿದೆ.

ಕುಳಾಯಿ ಮನೆಯೊಂದರ ಆವರಣದಲ್ಲಿ ನಿಲ್ಲಿಸಿಲಾಗಿದ್ದ ಪಿಕಪ್ ವಾಹನವನ್ನು ಕಳವು ಮಾಡಿದ ಪ್ರಕರಣದ ಬಳಿಕ ಫಾರಂ ಮಾಲ್ ನಲ್ಲಿ ಅನುಮಾಸ್ಪದವಾಗಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಗಮನಿಸಿ ಅವನನ್ನು ವಿಚಾರಣೆಗೆ ಕರೆದರು. ಅವನ ಬಳಿ ಯಾವುದೇ ಬೈಕ್ ನ ದಾಖಲೆಗಳು ಇರದ ಕಾರಣ ವಿಚಾರಣೆ ನಡೆಸಿದಾಗ ಬೈಕ್ ಕಳವು ಮಾಡಿದ್ದಾನೆ ಎಂದು ತಿಳಿದುಬಂದಿದೆ. ನಂತರ ಮುಂದಿನ ತನಿಖೆಯಲ್ಲಿ ಕುಳಾಯಿಯಿಂದ ಪಿಕಪ್ ವಾಹನ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿಯಿಂದ ಒಟ್ಟು 3.10 ಲಕ್ಷ ರೂ ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈತನ ವಿರುದ್ಧ ಕೇರಳದಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿದೆ.




