ಕಾಸರಗೋಡು: ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ವೊಂದು ಬೆಂಕಿಗೆ ಆಹುತಿಯಾದ ಘಟನೆ ಕಾಸರಗೋಡುವಿನ ಬೇಕೂರು ಪುಲಿಕುತ್ತಿ ಎಂಬಲ್ಲಿ ನಡೆದಿದೆ.

ಪುಲಿಕುತ್ತಿ ನಿವಾಸಿಯಾಗಿರುವ ಪ್ರವೀಣ್ ಶೆಟ್ಟಿ ಎಂಬವರ ಬೈಕ್ ರವಿವಾರ ರಾತ್ರಿ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಭಸ್ಮವಾಗಿದೆ.
ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ಕುಂಬಳೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




