Breaking
10 May 2026, Sun

ಕುಂದಾಪುರದ ಕೋಟದಲ್ಲಿ ಚಿನ್ನದ ಸರ ಕಳ್ಳತನ ಪ್ರಕರಣ, ಆರೋಪಿಯ ಬಂಧನ

ಉಡುಪಿ: ಜಿಲ್ಲೆಯ ಕುಂದಾಪುರ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಿನ್ನದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಶಿರಿಯಾರ ಗ್ರಾಮದ ನಿವಾಸಿ ಆರೋಪಿ ಆನಂದ (26) ಎಂಬವರನ್ನು ಬಂಧಿಸಿದ್ದಾರೆ. ಯಡಾಡಿ ಮತ್ಯಾಡಿ ಗ್ರಾಮದ ನಿವಾಸಿಯಾಗಿರುವ ಬಸವ ಪೂಜಾರಿ ಎಂಬವರು ತಮ್ಮ ಮನೆಯ ಗೋದ್ರೇಜ್‌ನಲ್ಲಿ ಇಟ್ಟುಕೊಂಡಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಕಳವು ಮಾಡಿದ್ದರು.

ಈ ಪ್ರಕರಣದ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಕೈಗೊಂಡ ಪಿ.ಎಸ್.ಐ ಪ್ರವೀಣ ಕುಮಾರ್, ಸುಧಾ ಪ್ರಭು ಮತ್ತು ಠಾಣಾ ಸಿಬ್ಬಂದಿಯರು ಶೀಘ್ರ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿ, ಕಳವಾದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *