Breaking
19 Sep 2026, Sat

ಕಾಸರಗೋಡಿನಲ್ಲಿ ಬೈಕ್ ತಡೆದು ಇಬ್ಬರಿಗೆ ಹಲ್ಲೆ : ಪ್ರಕರಣ ದಾಖಲು

ಕಾಸರಗೋಡು: ಬೈಕ್ ತಡೆದು ನಿಲ್ಲಿಸಿ ಸವಾರರಿಬ್ಬರಿಗೆ ನಾಲ್ವರು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಬೈಕಲ್ಲಿ ಬಾಡೂರು ಸನಿಹದ ಓಣಿಬಾಗಿಲು ಬಳಿ ಸಂಚರಿಸುತ್ತಿರುವ ವೇಳೆ, ಸ್ಕೂಟರಲ್ಲಿ ಆಗಮಿಸಿದ ನಾಲ್ವರ ತಂಡ ಬೈಕ್ ತಡೆದು ಹಲ್ಲೆ ನಡೆಸಿದ್ದು, ಈ ಕುರಿತು ಜಯಂತ, ವಸಂತ ಸೇರಿದಂತೆ ನಾಲ್ವರ ವಿರುದ್ಧ ಶೇಣಿ ಪಜ್ಜಾಣ ನಿವಾಸಿ ಅಜೀಶ್ ಜೋಸೆಫ್ ಹಾಗೂ ಅವರ ಸ್ನೇಹಿತ ಗಣೇಶ್ ದೂರು ನೀಡಿದ್ದಾರೆ.

ಪಂಚಾಯಿತಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ ದ್ವೇಷವೇ ಹಲ್ಲೆಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಬದಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *