Breaking
23 Dec 2024, Mon

ರಾಜ್ಯದ ಹಲವು ಆರ್​ಟಿಓ ಚೆಕ್​​ ಪೋಸ್ಟ್​ಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರ: ಬೆಳ್ಳಂ ಬೆಳಗ್ಗೆ ಲೋಕಾಯುಕ್ತ  ಅಧಿಕಾರಿಗಳು ರಾಜ್ಯದ ಹಲವು ಆರ್​ಟಿಓ ಚೆಕ್ ಪೋಸ್ಟ್​​ಗಳ  ಮೇಲೆ ದಾಳಿ ಮಾಡಿದ್ದಾರೆ.

ಕೋಲಾರ, ಬೀದರ್​​ ಜಿಲ್ಲೆಗಳಲ್ಲಿನ ಆರ್​ಟಿಓ ಚೆಕ್​​ ಪೋಸ್ಟ್​​ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಕ್ರಾಸ್ ಬಳಿ ಇರುವ ಆರ್​ಟಿಓ ಚೆಕ್ ಪೋಸ್ಟ್ ಹಾಗೂ ಮುಳಬಾಗಿಲು ತಾಲೂಕು ನಂಗಲಿ ಆರ್​ಟಿಓ ಚೆಕ್ ಪೋಸ್ಟ್ ಮೇಲೆ ಕೋಲಾರ ಲೋಕಾಯುಕ್ತ ಎಸ್ಪಿ ಧನಂಜಯ ನೇತೃತ್ವದ ತಂಡ ದಾಳಿ ಮಾಡಿದೆ.

ಆರ್​ಟಿಓ ಚೆಕ್ ಪೋಸ್ಟ್​​ ಸಿಬ್ಬಂದಿ ವಿರುದ್ಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೂಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ದೂರು ಕೇಳಿಬಂದ ಆರ್​ಟಿಓ ಚೆಕ್​ಪೋಸ್ಟ್​​ಗಳ ಮೇಲೆ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಎರಡೂ ಚೆಕ್ ಪೋಸ್ಟ್​​ಗಳಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಹಣ ಪತ್ತೆಯಾಗಿದೆ. ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿರುವ ಆರ್​ಟಿಓ ಚೆಕ್ ಪೋಸ್ಟ್​​ನಲ್ಲಿನ ಸಿಬ್ಬಂದಿ ವಿರುದ್ಧ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಬೀದರ್ ಹಾಗೂ ಕಲಬುರಗಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ್, ಕಲಬುರಗಿ ಲೋಕಾಯುಕ್ತ ಡಿವೈಎಸ್​ಪಿ ಗೀತಾ ಬೀದರ್ ಮತ್ತು ಡಿವೈಎಸ್​ಪಿ ಹಣುಮಂತರಾಯ ನೇತೃತ್ವದ 4 ತಂಡದಿಂದ ಪರಿಶೀಲನೆ ನಡೆಯುತ್ತಿದೆ.

Leave a Reply

Your email address will not be published. Required fields are marked *