Breaking
23 Mar 2026, Mon

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಳದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಗವದ್ಭಕ್ತರ ವಿಶೇಷ ಸಭೆ

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಶ್ರೀ ದೇವಳದ ಸಮಗ್ರ ಅಭಿವೃದ್ಧಿಯ ಅಂಗವಾಗಿ ಸಂಕಲ್ಪಿತ ಭೂದಾನ ಸೇವಾ ಕಾಣಿಕೆ ಹಾಗೂ ಮುಷ್ಟಿ ಅಕ್ಕಿ ಕಾಣಿಕೆ, ನಿತ್ಯ ಹೂಮಾಲೆ ಅಲಂಕಾರ ಸೇವೆ ಬಗ್ಗೆ ಸಜೀಪ ನಡು ಪಡು ಗ್ರಾಮಗಳ ಭಗವದ್ಭಕ್ತರ ವಿಶೇಷ ಸಭೆ ನಡೆಯಿತು.

ದೇವಳದ ಮೊಬೈಲ್ ತಂತ್ರಾಂಶದ ಲೋಕಾರ್ಪಣೆಯನ್ನು ಟಿ ಜಿ ರಾಜಾರಾಮ್ ಭಟ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ನೆರವೇರಿಸಿದರು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ವೇಳೆ ದೇವಳಕ್ಕೆ ಮೊಬೈಲ್ ತಂತ್ರಾಂಶವನ್ನು ಉಚಿತವಾಗಿ ಒದಗಿಸಿದ ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ನ ಗೋಪಾಲಕೃಷ್ಣ ಭಟ್ ಅವರು ಮೊಬೈಲ್ ತಂತ್ರಾಂಶದ ಸಮಗ್ರ ಮಾಹಿತಿ ನೀಡಿದರು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಸುಬ್ರಹ್ಮಣ್ಯ ದೇವರ ಆರಾಧನೆಯ ಮಹತ್ವವನ್ನು ತಿಳಿಸಿದರು. ನೌಕಾದಳದ ಮಾಜಿ ಸೇನಾನಿ ವಸಂತ ರಾವ್ ಭೂದಾನ ಕಾಣಿಕೆ ಸಮರ್ಪಣೆಯಲ್ಲಿ ಎಲ್ಲರೂ ಭಾಗಿಗಳಾಗುವಂತೆ ಕರೆ ನೀಡಿದರು.

ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತಾಡಿ ಸರ್ವರನ್ನು ಸ್ವಾಗತಿಸಿದರು, ಪ್ರಮೋದ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *