Breaking
22 Sep 2026, Tue

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸೇವಾದರದಲ್ಲಿ ಇಳಿಕೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅಕ್ಟೋಬರ್ 1 ರಿಂದ ಹೊಸ ಸೇವಾದರ ಜಾರಿಗೆ ಬಂದಿದೆ.

ಸೇವಾದರ ಏರಿಕೆ ಬಗ್ಗೆ ದೇಗುಲ ಪ್ರಕಟನೆ ಕೊಟ್ಟ ಬಳಿಕ ಕೆಲವರು ದರ ಇಳಿಸುವಂತೆ ಜನಪ್ರತಿನಿಧಿಗಳು, ದೇಗುಲದ ಆಡಳಿತ ಮಂಡಳಿಗೆ ಮನವಿ ನೀಡಿದ್ದರು. ಇದರ ಪರಿಣಾಮ ಹೂವಿನ ಪೂಜೆ 200 ರೂ., ಕಾರ್ತಿಪೂಜೆ 20 ರೂ. ತೀರ್ಥಬಾಟಲಿ 10 ರೂ. ಹೀಗೆ ಕೆಲವು ಸೇವೆಗಳ ಏರಿದ ದರದಲ್ಲಿ ಇಳಿಕೆ ಮಾಡಲಾಗಿದೆ.

ಮಹಾನವಮಿ ಹಾಗೂ ವಿಜಯದಶಮಿಯ ಎರಡೂ ದಿನಗಳಲ್ಲಿ 1,500ಕ್ಕೂ ಹೆಚ್ಚು ವಾಹನ ಪೂಜೆ, ನೂರರಷ್ಟು ಮಕ್ಕಳಿಗೆ ಅಕ್ಷರಾಭ್ಯಾಸ, 6100 ಹೂವಿನ ಪೂಜೆ, 4500 ಕುಂಕುಮಾರ್ಚನೆ ಸೇವೆಗಳಲ್ಲದೇ ಐನೂರಕ್ಕೂ ಹೆಚ್ಚು ಸೀರೆ ದೇವರಿಗೆ ಕಾಣಿಕೆಯಾಗಿ ಬಂದಿವೆ ಎಂದು ದೇವಸ್ಥಾನ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *