Breaking
24 Mar 2026, Tue

ಬೆಳ್ತಂಗಡಿಯ ಇಬ್ಬರು ಆಂಬುಲೆನ್ಸ್ ಚಾಲಕರಿಗೆ ಎಸ್.ಐ.ಟಿ ಕರೆ

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಬೆಳ್ತಂಗಡಿಯ ಇಬ್ಬರು ಸಮಾಜಸೇವಕ ಆಂಬುಲೆನ್ಸ್ ಚಾಲಕರನ್ನು ಅ.4 ರಂದು ಎಸ್.ಐ.ಟಿ ವಿಚಾರಣೆಗೆ ಕರೆದಿದೆ.

ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಸಮಾಜಸೇವಕರಾಗಿ ಆಂಬುಲೆನ್ಸ್ ವಾಹನದಲ್ಲಿ ಸೇವೆ ಮಾಡುತ್ತಿರುವ ಜಲೀಲ್ ಬಾಬಾ ಮತ್ತು ಹಮೀದ್ ಈ ಇಬ್ಬರು ಇಂದು ವಿಚಾರಣೆಯನ್ನು ಎದುರಿಸಲಿದ್ದಾರೆ.

ಈ ಇಬ್ಬರನ್ನು ಧರ್ಮಸ್ಥಳ ಗ್ರಾಮದಲ್ಲಿ ಯುಡಿಆರ್ ಪ್ರಕರಣದಲ್ಲಿ ಪೊಲೀಸರ ಸಮ್ಮುಖದಲ್ಲಿ ಶವಗಾರಕ್ಕೆ ಸಾಗಿಸಿದ ಬಗ್ಗೆ ಹೇಳಿಕೆ ಪಡೆದುಕೊಳ್ಳಲು ಕರೆದಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *