Breaking
29 Jun 2026, Mon

ರಾಜ್ಯದಲ್ಲಿ ಎರಡು ವಾರ ‘ಮುಂಗಾರು’ ಮುಂದುವರಿಕೆ : 5 ದಿನ ‘ಗುಡುಗು’ ಸಹಿತ ಮಳೆ

ರಾಜ್ಯದಲ್ಲಿ ಇನ್ನೂ ಎರಡು ವಾರ ಮುಂಗಾರು ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುಜರಾತ್, ಒಡಿಶಾ ಸಮುದ್ರ ತೀರದಲ್ಲಿ ಪ್ರಸ್ತುತ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದಲ್ಲಿ ಮುಂದಿನ ಎರಡು ವಾರ ಮಳೆ ಆಗಲಿದೆ. ಮುಂಗಾರು ಮುಗಿದ ಬಳಿಕ ಈಶಾನ್ಯ ಮಾನ್ಸೂನ್ ಹಿಂಗಾರು ಮಾರುತ ಸಕ್ರಿಯವಾಗುತ್ತವೆ.

ಅಕ್ಟೋಬರ್ 4 ರಿಂದ 10 ರವರೆಗೆ ಉತ್ತಮ ಮಳೆಯಾಗಲಿದ್ದು, ಈ ಅವಧಿಯಲ್ಲಿ ಕೆಲವೆಡೆ ಮಳೆಗಿಂತ ಬಿರುಗಾಳಿ ಹೆಚ್ಚಾಗಿರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *